ಡೀಲ್ ರಾಜ ಈವಾರ ತೆರೆಗೆ
Posted date: 27 Wed, Jul 2016 – 10:39:33 AM

ಕೋಮಲ್ ಚಿತ್ರಗಳೆಂದರೆ ಕುತೂಹಲ, ನಿರೀಕ್ಷೆ ಇದ್ದದ್ದೇ. ಆದರೆ, ಡೀಲ್ ರಾಜ ಚಿತ್ರದ ಬಗ್ಗೆ ಆ ಪ್ರಮಾಣ ತುಸು ಹೆಚ್ಚೇ ಇದೆ. ಯುವ ನಿರ್ದೇಶಕ ರಾಜ್ ಗೋಪಿ ಏನೋ ಹೊಸಾ ಕಮಾಲ್ ಮಾಡಿದ್ದಾರೆಂಬ ನಂಬಿಕೆಯೇ ಈ ಚಿತ್ರಕ್ಕಾಗಿ ಕಾಯುವಂತೆ ಮಾಡಿತ್ತು. ಇದೇ ವಾರ ಡೀಲ್ ರಾಜ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಇತ್ತೀಚೆಗೆ ರಿಲೀಸ್ ಆದ ಚಿತ್ರದ ಹಾಡುಗಳೂ ಸೂಪರ್ ಹಿಟ್ಟಾಗಿರೋದರಿಂದ, ಇದರ ಕಥೆ ಎಂಥಾದ್ದಿರಬಹುದೆಂಬ ಬಗ್ಗೆ ಪ್ರೇಕ್ಷಕರ ನಡುವೆ ಚರ್ಚೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಕೆಲ ಕುತೂಹಲಕರ ಅಂಶಗಳು ಜಾಹೀರಾಗುತ್ತವೆ. ಡೀಲ್ ರಾಜಾನದ್ದು ಜೈಲ್ ಸಬ್ಜೆಕ್ಟ್ ಹೊಂದಿರೋ ಕಥಾ ಹಂದರ. ಈ ವರೆಗೆ ಇಂಥಾ ಹೊಳಹಿನ ಕಥೆಗಳು ಒಂದಷ್ಟು ಬಂದಿರೋದು ನಿಜ. ಆದರೆ ಡೀಲ್‌ರಾಜಾ ಪಕ್ಕಾ ಡಿಫರೆಂಟ್.
ಕೋಮಲ್ ಇಲ್ಲಿ ಎಂಥವರನ್ನೂ ಕಣ್ಣು ಮಿಟುಕಿಸುವಷ್ಟರಲ್ಲಿ ಯಾಮಾರಿಸುವಂಥಾ ಪ್ರಳಯಾಂತಕ ಡೀಲ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಅಂಥಾ ಪ್ರಳಯಾಂತಕ ಯಾಕೆ ಜೈಲಿನ ಪರಿಧಿಗೆ ಬರುತ್ತಾನೆ ಎಂಬುದು ಅಸಲೀ ಸೀಕ್ರೆಟ್. ಒಟ್ಟಾರೆಯಾಗಿ ಈ ಚಿತ್ರದಲ್ಲಿ ಜೈಲೂ ಕೂಡಾ ಪ್ರಧಾನ ಪಾತ್ರ ವಹಿಸಿದೆ.
ಇದೇ ೨೯ರಂದು ತೆರೆ ಕಾಣಲಿರೋ ಡೀಲ್ ರಾಜ ಅಂದುಕೊಂಡಂತೆಯೇ ಅದ್ಭುತವಾಗಿ ಮೂಡಿ ಬಂದಿದೆ ಎಂಬ ತೃಪ್ತಿ ಚಿತ್ರ ತಂಡದಲ್ಲಿ ಎದ್ದು ಕಾಣುತ್ತಿದೆ. ಅಂಥಾದ್ದೊಂದು ತೃಪ್ತ ಭಾವನೆ ಮೂಡಿಕೊಂಡಿರುವುದಕ್ಕೆ ಕಾರಣವಾಗಿರುವವರು ನಿರ್ಮಾಪಕರಾದ ರವಿಚಂದ್ರ ರೆಡ್ಡಿ ಮತ್ತು ಕೃಷ್ಣಮೂರ್ತಿ.
ಆರಂಭದಲ್ಲಿ ಎಸ್. ನಾರಾಯಣ್ ಬಳಿ ಕೆಲಸ ಮಾಡಿ, ನಂತರ ಸ್ವತಂತ್ರ ನಿರ್ದೇಶಕರಾದ ಯುವಕ ರಾಜ್ ಗೋಪಿ. ತುಂಬಾ ಸೀರಿಯಸ್ ಆದ ವಿಚಾರವೊಂದನ್ನು ಕಾಮಿಡಿ ಮೂಲಕ ನಿರೂಪಿಸುವುದರಲ್ಲಿ ಗೋಪಿ ಎಕ್ಸ್‌ಪರ್ಟ್. ಈ ಹಿಂದೆ ಸಡಗರ ಎನ್ನುವ ಸಿನಿಮಾವನ್ನು ಗೋಪಿ ಡೈರೆಕ್ಟ್ ಮಾಡಿದ್ದರು. ಸಿನಿಮಾ ಚೆನ್ನಾಗೇ ಇದ್ದರೂ ಹೆಸರಿರುವ ಹೀರೋ ಇಲ್ಲ ಅನ್ನೋ ಒಂದೇ ಕಾರಣಕ್ಕೆ ಅದು ಬಾಕ್ಸಾಫೀಸಿನಲ್ಲಿ ನೆಲಕಚ್ಚಿತ್ತು. ಈ ಬಾರಿ ಗೆದ್ದೇ ಗೆಲ್ಲಬೇಕು ಎನ್ನುವ ಪಣ ತೊಟ್ಟು ಡೀಲ್‌ರಾಜನನ್ನು ಸಿದ್ದಗೊಳಿಸಿದ್ದಾರೆ. ನಿರ್ಮಾಪಕ ರವಿಚಂದ್ರ ರೆಡ್ಡಿ ಕೂಡಾ ಎಲ್ಲೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ಈ ಕಾರಣಕ್ಕೇ ಡೀಲ್‌ರಾಜ ಸಖತ್ ರಿಚ್ ಆಗಿ ಮೂಡಿಬಂದಿದೆ. ಮೊನ್ನೆ ರಿಲೀಸಾಗಿರುವ ಚಿತ್ರದ ಟೀಸರ್ ಮತ್ತು ಹಾಡುಗಳನ್ನು ನೋಡಿದರೇನೇ ದೃಶ್ಯ ಶ್ರೀಮಂತಿಕೆ ಎದ್ದುಕಾಣುತ್ತದೆ.
ತೆಲುಗಿನಿಂದ ಬಂದಳು ಭಾನುಶ್ರೀ
ತೆಲುಗಿನ ಹಿಟ್ ಚಿತ್ರ ವರುಡು ಚಿತ್ರದ ನಾಯಕಿ ಭಾನುಶ್ರೀ ಡೀಲ್ ರಾಜ್ ಚಿತ್ರದ ನಾಯಕಿ. ಈ ಸಿನಿಮಾದಲ್ಲಿ ಭಾನುಶ್ರೀ ಪೊಲೀಸ್ ಪೇದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಭಾನುಶ್ರೀ ಅಭಿನಯದ ಮೊದಲ ಕನ್ನಡ ಸಿನಿಮಾ. ಅಲ್ಲದೇ ಸುಮನ್ ರಂಗನಾಥ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರ ತಲೆ ಮೇಲೆ ಕೈಯಿಟ್ಟಾದರೂ ಸರಿ ಸಲೀಸಾಗಿ ದುಡ್ಡು ಮಾಡಬೇಕು ಎನ್ನುವ ಹೀರೋ ಮಹತ್ವದ ಕಾರಣವೊಂದಕ್ಕೆ ಜೈಲು ಸೇರುತ್ತಾನೆ. ಆಗ ಜೈಲಿನಲ್ಲಿ ಏನೆಲ್ಲಾ ನಡೆಯುತ್ತದೆ. ಹೀರೋ ಪ್ಲಾನು ವರ್ಕ್‌ಔಟ್ ಆಗುತ್ತಾ? ಅನ್ನೋದು ಡೀಲ್‌ರಾಜ ಚಿತ್ರದ ಕಥಾ ಹಂದರ. ಈ ಸಿನಿಮಾದಲ್ಲಿ ಕನ್ನಡದ ಬಹುತೇಕ ಹಾಸ್ಯ ಕಲಾವಿದರು ಕಾಣಿಸಿಕೊಂಡಿರೋದು ವಿಶೇಷ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed